ಸರ್‌‌‌ ಆಂಥನಿ ಹಾಪ್ಕಿನ್ಸ್‌‌‌ ರವರು, (ಜನ್ಮ ನಾಮ ಫಿಲಿಪ್‌‌‌‌ ಆಂಥನಿ ಹಾಪ್ಕಿನ್ಸ್ ‌‌‌; 31 ಡಿಸೆಂಬರ್‌ 1937) ಓರ್ವ ವೆಲ್ಷ್‌‌‌ ಭಾಷಿಕ ಚಲನಚಿತ್ರ, ರಂಗಭೂಮಿ ಮತ್ತು ಕಿರುತೆರೆ ನಟರಾಗಿದ್ದಾರೆ. ಚಲನಚಿತ್ರರಂಗದ ಜೀವಿತ ಶ್ರೇಷ್ಠ ನಟರಲ್ಲಿ, ಒಬ್ಬರೆಂದು ಪರಿಗಣಿಸಲಾದ ಅವರು ದ ಸೈಲೆನ್ಸ್‌‌ ಆಫ್‌‌ ದ ಲ್ಯಾಂಬ್ಸ್‌‌ ಚಿತ್ರದಲ್ಲಿನ ನರಭಕ್ಷಕ ಸರಣಿ ಕೊಲೆಗಾರ ಹ್ಯಾನ್ನಿಬಾಲ್‌‌‌‌ ಲೆಕ್ಟರ್‌‌‌ನ ಪಾತ್ರ ನಿರ್ವಹಣೆಗಾಗಿ ಪ್ರಸಿದ್ಧರಾಗಿದ್ದು, ಆ ಚಿತ್ರದ ಉತ್ತರ ಭಾಗವಾದ ಹ್ಯಾನ್ನಿಬಾಲ್ ‌‌‌‌ ಮತ್ತು ಅದರ ಕೃತಿ ಆಧಾರಿತ ಚಿತ್ರವಾದ ರೆಡ್‌‌ ಡ್ರಾಗನ್‌‌ ಗಳಲ್ಲಿ ಕೂಡಾ ನಟಿಸಿದ್ದಾರೆ. ಅವರು ನಟಿಸಿರುವ ಇತರ ಪ್ರಮುಖ ಚಿತ್ರಗಳಲ್ಲಿ ಮ್ಯಾಜಿಕ್ ‌‌‌, ದ ಎಲಿಫೆಂಟ್‌‌ ಮ್ಯಾನ್‌‌ , 84 ಚೇರಿಂಗ್‌ ಕ್ರಾಸ್‌‌ ರೋಡ್ ‌‌, ಡ್ರಾಕುಲಾ , ಲೆಜೆಂಡ್ಸ್‌‌ ಆಫ್‌‌ ದ ಫಾಲ್ ‌‌, ದ ರಿಮೇನ್ಸ್‌‌ ಆಫ್‌‌ ದ ಡೇ , ಅಮಿಸ್ಟಾಡ್‌‌‌ , ನಿಕ್ಸಾನ್‌‌‌ ಮತ್ತು ಫ್ರಾಕ್ಚರ್‌‌‌ ಸೇರಿವೆ. ವೇಲ್ಸ್‌‌ನಲ್ಲಿ ಹುಟ್ಟಿದ ಹಾಪ್ಕಿನ್ಸ್‌‌‌ರವರು ಅಲ್ಲಿಯೇ ಬೆಳೆದವರು. ತಮ್ಮ ಬ್ರಿಟಿಷ್‌‌‌ ಪೌರತ್ವವನ್ನು ಉಳಿಸಿಕೊಂಡೂ, 12 ಏಪ್ರಿಲ್‌ 2000ರಂದು ಅವರು .. ಪೌರತ್ವ ಪಡೆದುಕೊಂಡರು. 2003ರಲ್ಲಿ ಹಾಲಿವುಡ್‌ ವಾಕ್‌ ಆಫ್‌ ಫೇಮ್‌‌ನಲ್ಲಿ ಅವರು ನಕ್ಷತ್ರದ ಪ್ರಾತಿನಿಧಿತ್ವವನ್ನು ಪಡೆದುಕೊಂಡರಲ್ಲದೇ 2008ರಲ್ಲಿ ಬ್ರಿಟಿಷ್‌‌‌ ಅಕಾಡೆಮಿ ಆಫ್‌‌ ಫಿಲ್ಮ್‌‌‌‌ ಅಂಡ್‌‌ ಟೆಲಿವಿಷನ್‌‌‌ ಆರ್ಟ್ಸ್‌‌ನಲ್ಲಿ ಫೆಲೋ ಗೌರವ ಪಡೆದರು. == ಆರಂಭಿಕ ಜೀವನ == ವೇಲ್ಸ್‌‌ನ ಟಾಲ್ಬಾಟ್‌‌ ಬಂದರು ನಗರದ ಮಾರ್ಗಮ್‌‌ನಲ್ಲಿ, ಓರ್ವ ಬ್ರೆಡ್‌ ವ್ಯಾಪಾರಿಯಾಗಿದ್ದ ರಿಚರ್ಡ್‌‌ ಆರ್ಥರ್‌‌‌ ಹಾಪ್ಕಿನ್ಸ್‌‌‌ ಮತ್ತು ಮ್ಯೂರಿಯೆಲ್‌ ಆನ್ನೆರವರ (ನೀ ಯೀಟ್ಸ್‌‌‌) ಪುತ್ರನಾಗಿ ಹಾಪ್ಕಿನ್ಸ್‌‌‌ರು ಜನಿಸಿದರು. ಆತನ ಶಾಲಾದಿನಗಳು ಅಷ್ಟು ಪ್ರಯೋಜಕವಾಗಿರದಿದ್ದುದರಿಂದ ತಾನು ಪೇಂಟಿಂಗ್‌ ಮತ್ತು ಚಿತ್ರಕಲೆಗಳು ಅಥವಾ ಪಿಯಾನೋ ನುಡಿಸುವಿಕೆಯಂತಹಾ ಕಲಾ ಪ್ರಕಾರಗಳಲ್ಲಿ ಮುಳುಗುವುದು ಶಾಲೆಗೆ ಹಾಜರಾಗುವುದಕ್ಕಿಂತ ಹೆಚ್ಚು ಪ್ರಯೋಜನಕಾರಿ ಎಂದು ಆತನಿಗನಿಸಿತ್ತು. 1949ರಲ್ಲಿ, ಆತನ ಪೋಷಕರು ಆತನಿಗೆ ಶಿಸ್ತನ್ನು ರೂಢಿಸಲು ಪಾಂಟಿಪೂಲ್‌‌‌ನಲ್ಲಿದ್ದ ಜೋನ್ಸ್‌‌ ವೆಸ್ಟ್‌‌ ಮಾನ್‌‌ಮೌತ್‌‌‌‌ ಬಾಲಕರ ಶಾಲೆಗೆ ಹೋಗಲು ಆಗ್ರಹಿಸಿದ್ದರು. ಅವರು ಅಲ್ಲಿಯೇ ಐದು ಅವಧಿಗಳನ್ನು ಪೂರೈಸಿ ನಂತರ ವೇಲ್ಸ್‌‌ನಲ್ಲಿನ ವೇಲ್‌‌ ಆಫ್‌‌ ಗ್ಲಾಮಾರ್ಗನ್‌‌ನಲ್ಲಿರುವ ಕೌಬ್ರಿಡ್ಜ್‌‌ ಗ್ರಾಮರ್‌‌ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ತನ್ನ 15ನೇ ವಯಸ್ಸಿನಲ್ಲಿ ಅಲ್ಪಕಾಲೀನ ಭೇಟಿಯಲ್ಲಿ ಪರಿಚಿತರಾದ ದೇಶಬಾಂಧವ ರಿಚರ್ಡ್‌‌ ಬರ್ಟನ್‌‌‌ರಿಂದ ಹಾಪ್ಕಿನ್ಸ್‌‌‌ ಪ್ರಭಾವಿತನಾದನಲ್ಲದೇ, ಅವರ ಉತ್ತೇಜನದಿಂದ ನಟನಾದನು. ಆ ದಿಕ್ಕಿನೆಡೆಗೆ ಮುಂದುವರೆಯಲು ಕಾರ್ಡಿಫ್‌‌‌ನಲ್ಲಿನ ರಾಯಲ್‌‌‌‌ ವೆಲ್ಷ್‌‌‌ ಕಾಲೇಜ್‌ ಆಫ್‌‌ ಮ್ಯೂಸಿಕ್‌‌ & ಡ್ರಾಮಾ ಕಲಾಶಾಲೆಗೆ ಸೇರಿಕೊಂಡ ನಂತರ 1957ರಲ್ಲಿ ಪದವಿ ಪಡೆದನು. ಬ್ರಿಟಿಷ್‌‌‌ ಸೇನಾಪಡೆಯಲ್ಲಿ ರಾಷ್ಟ್ರೀಯ ಕರ್ತವ್ಯದಡಿ ಎರಡು ವರ್ಷ ಸೇವೆ ಸಲ್ಲಿಸಿದ ನಂತರ, ಲಂಡನ್‌‌‌ಗೆ ತೆರಳಿದ ಅವನು ಅಲ್ಲಿನ ರಾಯಲ್‌ ಅಕಾಡೆಮಿ ಆಫ್‌ ಡ್ರಾಮಾಟಿಕ್‌ ಆರ್ಟ್‌‌ನಲ್ಲಿ ತರಬೇತಿ ಪಡೆದನು. == ವೃತ್ತಿಜೀವನ == 1965ರಲ್ಲಿ, ಅನೇಕ ವರ್ಷಗಳ ಕಾಲ ಸಿದ್ಧನಾಟಕ ಪ್ರದರ್ಶನಗಳಲ್ಲಿ ಪಳಗಿದ ನಂತರ, ಸರ್‌‌‌ ಲಾರೆನ್ಸ್‌‌ ಆಲಿವಿಯೆರ್‌‌‌ರ ಕಣ್ಣಿಗೆ ಬಿದ್ದಾಗ ಅವರು, ಆತನನ್ನು ರಾಯಲ್‌ ನ್ಯಾಷನಲ್‌ ಥಿಯೇಟರ್‌‌ಗೆ ಸೇರುವಂತೆ ಆಹ್ವಾನಿಸಿದರು. ಆಗ ಹಾಪ್ಕಿನ್ಸ್‌‌‌ನು ಆಲಿವಿಯೆರ್‌‌‌'ರ ಬದಲಿನಟನಾದನಲ್ಲದೇ ಆಗಸ್ಟ್‌ ಸ್ಟ್ರಿಂಡ್‌ಬರ್ಗ್‌‌‌'ರ ದ ಡಾನ್ಸ್‌‌ ಆಫ್‌ ಡೆತ್‌‌ ಚಿತ್ರದ ನಿರ್ಮಾಣದ ಸಂದರ್ಭದಲ್ಲಿ ಆಲಿವಿಯೆರ್‌ರು‌‌ ಕರುಳುತುದಿಯ ಉರಿಯೂತ/ಅಪೆಂಡಿಸೈಟಿಸ್‌‌ನಿಂದಾಗಿ ಅನಾರೋಗ್ಯಪೀಡಿತರಾದಾಗ ಅವರ ಜವಾಬ್ದಾರಿ ವಹಿಸಿಕೊಂಡನು. ನಂತರ ಆಲಿವಿಯೆರ್‌‌‌ರು ತಮ್ಮ ಆತ್ಮಚರಿತ್ರೆಯಾದ ಕನ್‌ಫೆಷನ್ಸ್‌‌‌ ಆಫ್‌‌ ಆನ್‌‌ ಆಕ್ಟರ್‌‌ ನಲ್ಲಿ, ಹೀಗೆ ಹೇಳುತ್ತಾರೆ, "ಕಂಪೆನಿಯ ಆಂಥನಿ ಹಾಪ್ಕಿನ್ಸ್‌‌‌ ಎಂಬ ಓರ್ವ ಉತ್ತಮ ಭರವಸೆಯ ಯುವ ನಟ ನನ್ನ ಬದಲಿನಟನಾಗಿದ್ದವನು, ಎಡ್ಗರ್‌ನ ಪಾತ್ರವನ್ನು ಇಲಿಯನ್ನು ಹಲ್ಲಿನ ನಡುವೆ ಬೆಕ್ಕು ಕಚ್ಚಿಕೊಂಡು ಹೋಗುವ ರೀತಿಯಲ್ಲಿ ಸಲೀಸಾಗಿ ಪಡೆದುಕೊಂಡುಬಿಟ್ಟನು." ನ್ಯಾಷನಲ್‌ನಲ್ಲಿ ತನ್ನ ಯಶಸ್ಸಿನ ಹೊರತಾಗಿಯೂ, ಯಾವಾಗಲೂ ಅದೇ ಪಾತ್ರಗಳನ್ನು ಮಾಡಿ ಬೇಸತ್ತಿದ್ದ ಹಾಪ್ಕಿನ್ಸ್‌‌‌ ಚಲನಚಿತ್ರಗಳಲ್ಲಿ ನಟಿಸಲು ಹಾತೊರೆಯತೊಡಗಿದನು. 1967ರಲ್ಲಿ ಫ್ಲಿಯಾ ಇನ್‌ ಹರ್‌ ಇಯರ್‌‌ ನ BBCಯ ಪ್ರಸಾರದ ಮೂಲಕ ಆತ ಕಿರುತೆರೆಗೆ ಪ್ರವೇಶಿಸಿದರು. 1968ರಲ್ಲಿ, ಪೀಟರ್‌‌ ಓ'ಟೂಲೆ, ಕ್ಯಾಥರೀನ್‌ ಹೆಪ್‌ಬರ್ನ್‌‌‌ ಮತ್ತು ಫ್ರಾನ್ಸ್‌‌ನ ಫಿಲಿಪ್‌‌‌‌ ಪಾತ್ರ ವಹಿಸಿದ್ದ ಭಾವೀ ಜೇಮ್ಸ್‌‌ ಬಾಂಡ್‌‌ ತಾರೆ ಟಿಮೊತಿ ಡಾಲ್ಟನ್‌‌ರವರುಗಳೊಂದಿಗೆ ದ ಲಯನ್‌‌ ಇನ್‌‌ ವಿಂಟರ್‌‌ ನಲ್ಲಿ ರಿಚರ್ಡ್‌‌ ಪಾತ್ರ ವಹಿಸುವ ಮೂಲಕ ಜನಪ್ರಿಯರಾದರು. ರಂಗಭೂಮಿಯಲ್ಲಿ ನಟಿಸುವುದನ್ನು ಹಾಪ್ಕಿನ್ಸ್‌‌‌ ಮುಂದುವರೆಸಿದರೂ (ಗಮನಾರ್ಹವಾಗಿ ನ್ಯಾಷನಲ್‌ ಥಿಯೇಟರ್‌‌ನಲ್ಲಿ ಡೇವಿಡ್‌ ಹೇರ್‌‌ ಮತ್ತು ಹೋವರ್ಡ್‌ ಬ್ರೆಂಟನ್‌‌ರ ಪ್ರಾವ್ಡಾ ದ ಲ್ಯಾಂಬರ್ಟ್‌ ಲೆ ರೌಕ್ಸ್‌‌ ಪಾತ್ರ ಮತ್ತು ಆಂಟನಿ ಅಂಡ್‌ ಕ್ಲಿಯೋಪಾತ್ರ ದಲ್ಲಿ ಜೂಡಿ ಡೆಂಚ್‌‌ರ ಎದುರು ಆಂಟನಿ ಪಾತ್ರದಲ್ಲಿ ಹಾಗೂ ಬ್ರಾಡ್‌ವೇ ನಿರ್ಮಾಣದ ಜಾನ್‌ ಡೆಕ್ಸ್‌ಟರ್‌‌ರ ನಿರ್ದೇಶನದ ಪೀಟರ್‌ ಷಾಫರ್‌‌'ರ ಈಕ್ವಸ್‌‌ ನಲ್ಲಿ) ಕಿರುತೆರೆ ಮತ್ತು ಚಲನಚಿತ್ರ ನಟನಾಗಿ ಹೆಚ್ಚು ಗುರುತಿಸಿಕೊಳ್ಳಲು ಆತ ಸಾವಕಾಶವಾಗಿ ಅದರಿಂದ ದೂರಸರಿದರು. ಆಗಿನಿಂದ ದೀರ್ಘ ವೃತ್ತಿಜೀವನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಆತ ತನ್ನ ಪಾತ್ರ ನಿರ್ವಹಣೆಗಳಿಗೆ ಪ್ರಶಂಸೆಗಳು ಹಾಗೂ ಪ್ರಶಸ್ತಿಗಳನ್ನು ಪಡೆದರು. ಕಮಾಂಡರ್‌ ಆಫ್‌‌ ಬ್ರಿಟಿಷ್‌‌‌ ಎಂಪೈರ್‌ () ಗೌರವ ಸ್ಥಾನವನ್ನು 1987ರಲ್ಲಿ ಮತ್ತು ಸಾಮಾನ್ಯ ನೈಟ್‌ ಪದವಿಯ ಗೌರವವನ್ನು 1993ರಲ್ಲಿ ಹಾಪ್ಕಿನ್ಸ್‌‌‌ರವರಿಗೆ ನೀಡಲಾಯಿತು. 1996ರಲ್ಲಿ ಲ್ಯಾಂಪೀಟರ್‌‌ನ ವೇಲ್ಸ್‌‌ ವಿಶ್ವವಿದ್ಯಾಲಯದಿಂದ ಗೌರವ ಫೆಲೋಶಿಪ್‌ ನೀಡಿ ಹಾಪ್ಕಿನ್ಸ್‌‌‌ರನ್ನು ಗೌರವಿಸಲಾಯಿತು. ತಮ್ಮ 2005ರ ಚಲನಚಿತ್ರ ದ ವರ್ಲ್ಡ್‌ಸ್‌‌ ಫಾಸ್ಟೆಸ್ಟ್‌ ಇಂಡಿಯನ್ ‌‌ನಲ್ಲಿನ ಬರ್ಟ್‌‌ ಮುನ್ರೋನ ಪಾತ್ರವು ತಮಗೆ ಪರಮಪ್ರಿಯವಾದುದು ಎಂದು ಹಾಪ್ಕಿನ್ಸ್‌‌‌ ಹೇಳಿಕೆ ನೀಡಿದ್ದಾರೆ. ತಾನು ನಿರ್ವಹಿಸಿದ ಪಾತ್ರಗಳಲ್ಲೇ ಮುನ್ರೋ ಪಾತ್ರವು ಅತೀ ಸುಲಭವಾದ ಪಾತ್ರವೆಂದೂ, ಇದಕ್ಕೆ ಕಾರಣ ಆ ಪಾತ್ರ ಹಾಗೂ ತಮ್ಮ ಜೀವನದೃಷ್ಟಿಗಳು ಒಂದೇ ಆಗಿತ್ತೆಂದು ಕೂಡಾ ಒತ್ತಿ ಹೇಳಿದರು. ತಮ್ಮ ಜೀವಮಾನದ ಸಾಧನೆಗಾಗಿ ಹಾಪ್ಕಿನ್ಸ್‌‌‌ರು 2006ರಲ್ಲಿ ಗೋಲ್ಡನ್‌ ಗ್ಲೋಬ್‌‌ ಸೆಸಿಲ್‌ . ಡೆಮಿಲ್ಲೆ ಪ್ರಶಸ್ತಿಯನ್ನು ಪಡೆದರು. ಅವರು ಅಕಾಡೆಮಿ ಫೆಲೋಷಿಪ್‌ ಪ್ರಶಸ್ತಿಯನ್ನು 2008ರಲ್ಲಿ ಪಡೆದರು. ಮಾರ್ವೆಲ್‌‌‌ ಕಾಮಿಕ್ಸ್‌‌‌‌‌‌'ನ ಥಾರ್‌ ‌‌‌ ಕಥೆಯ ಬರಲಿರುವ ಚಿತ್ರದ ಅವತರಣಿಕೆಯಲ್ಲಿ ಥಾರ್‌‌‌‌ನ ತಂದೆ ಓಡಿನ್‌‌ನ ಪಾತ್ರವನ್ನು ಹಾಪ್ಕಿನ್ಸ್‌‌‌ ವಹಿಸುತ್ತಿದ್ದಾರೆ. ಒಂದು ಉದ್ದೇಶಿಸಲಾಗಿರುವ ಅತಿಮಾನುಷ ಸಾಹಸ ಚಿತ್ರದಲ್ಲಿ : ಹಾಪ್ಕಿನ್ಸ್‌‌‌ರು ನಟಿಸಲಿದ್ದಾರೆಂದು 24 ಫೆಬ್ರವರಿ 2010ರಂದು ಘೋಷಿಸಲಾಯಿತು. "ಓರ್ವ ಸಾಂಪ್ರದಾಯಿಕವಲ್ಲದ ವಿಧಾನಗಳನ್ನು ಬಳಸುವ ಮಂತ್ರವಾದದಲ್ಲಿ ನಿಪುಣನಾದ " ಪಾತ್ರವನ್ನು ಅವರು ಅದರಲ್ಲಿ ವಹಿಸಲಿದ್ದಾರೆ. === ನಟನಾ ಶೈಲಿ === ಪಾತ್ರಗಳಿಗೆ ಸಂಬಂಧಪಟ್ಟ ಹಾಗೆ ನಡೆಸುವ ತಯಾರಿಗಳಿಗಾಗಿ ಹಾಪ್ಕಿನ್ಸ್‌‌‌ ಪ್ರಸಿದ್ಧರಾಗಿದ್ದಾರೆ. ತಾನೊಂದು ಚಿತ್ರವನ್ನು ಒಪ್ಪಿಕೊಂಡ ನಂತರ, ತಾನು "ಯೋಚಿಸದೇ ಹೇಳಬಹುದಾದಂತಹಾ" ಸಹಜತೆ ಬರುವವರೆಗೆ ತನ್ನ ಸಂಭಾಷಣೆಗಳನ್ನು ಸಾಕಷ್ಟು ಬಾರಿ (ಕೆಲವೊಮ್ಮೆ 200ಕ್ಕೂ ಹೆಚ್ಚು ಬಾರಿ) ತಾಲೀಮು ನಡೆಸುತ್ತೇನೆಂದು ಅನೇಕ ಸಂದರ್ಶನಗಳಲ್ಲಿ ಒಪ್ಪಿಕೊಂಡಿದ್ದಾರೆ. ಈ ಪ್ರವೃತ್ತಿಯು ಬಹುತೇಕ ಲೋಕಾಭಿರಾಮ ಎಂದೆನಿಸುವಂತಹಾ ಸಂಭಾಷಣೆಗೆ ಕಾರಣವಾಗಿ ಮುಂಚೆಯೇ ಈ ಬಗ್ಗೆ ನಡೆಸಿರುವ ತಯಾರಿಯ ಪ್ರಮಾಣವನ್ನು ತೋರಿಸುತ್ತದೆ. ಹೀಗೆ ಮಾಡುವುದು ಶ್ರದ್ಧಾತ್ಮಕ ಸುಧಾರಣೆಗೆ ಕಾರಣವಾದರೂ, ಅನೇಕ ವೇಳೆ ಸಂಭಾಷಣಾ ಪ್ರತಿಯನ್ನು ಯಥಾವತ್ತಾಗಿ ಅನುಸರಿಸದ ನಿರ್ದೇಶಕರೊಂದಿಗೆ ಭಿನ್ನಾಭಿಪ್ರಾಯವನ್ನು ಅಥವಾ ನಟನಿಗೆ ಹೆಚ್ಚುವರಿ ಎನಿಸುವಷ್ಟು ಬಾರಿ ದೃಶ್ಯಚಿತ್ರಣವನ್ನು ಬೇಡುತ್ತದೆ. ದೃಶ್ಯವೊಂದರ ಚಿತ್ರೀಕರಣ ಮುಗಿದ ತಕ್ಷಣ ಅದರ ಸಂಭಾಷಣೆಗಳನ್ನು ತೊರೆದುಬಿಡುತ್ತಿದ್ದುದರಿಂದ ನಂತರ ಹಾಪ್ಕಿನ್ಸ್‌‌‌ ಅದನ್ನು ನೆನಪಿಟ್ಟುಕೊಳ್ಳಲಾಗುತ್ತಿರಲಿಲ್ಲ. ಸಾಧಾರಣವಾಗಿ ವರ್ಷಗಳ ನಂತರವೂ ಚಿತ್ರಗಳಲ್ಲಿನ ತಮ್ಮ ಸಂಭಾಷಣೆಗಳನ್ನು ನೆನಪಿಟ್ಟುಕೊಳ್ಳಬಲ್ಲ ಇತರರಿಗಿಂತ ಈ ಪ್ರವೃತ್ತಿ ಭಿನ್ನವಾಗಿದೆ. ಹಾಪ್ಕಿನ್ಸ್‌‌‌ರ ಐದು ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ರಿಚರ್ಡ್‌‌ ಅಟೆನ್‌ಬರೋರು, ಭಿನ್ನ ಪ್ರವೃತ್ತಿಯ ತಾರೆಗಳು (ಹಾಪ್ಕಿನ್ಸ್‌‌ ಮತ್ತು ಡೆಬ್ರಾ ವಿಂಗರ್‌‌) ಈರ್ವರೂ ಒಟ್ಟಿಗೇ ಭಾಗವಹಿಸಿದ್ದ ಅನೇಕ ದೃಶ್ಯಗಳಿದ್ದ ಷಾಡೋಲ್ಯಾಂಡ್ಸ್‌‌‌ (1993)ನ ಚಿತ್ರೀಕರಣದಲ್ಲಿ ಭಿನ್ನತೆಗಳನ್ನು ಸರಿದೂಗಿಸಲು ಬಹಳವೇ ಹೊಂದಾಣಿಕೆ ಮಾಡಬೇಕಾಗಿತ್ತು. ತಾಲೀಮುಗಳ ಸಂಖ್ಯೆಯನ್ನು ಕಡಿಮೆ ಮಾಡಲಿಚ್ಛಿಸುವ ಹಾಪ್ಕಿನ್ಸ್‌‌‌ರು ತಾಜಾ ಚಿತ್ರೀಕರಣದ ಸಹಜತೆಯನ್ನು ಇಷ್ಟಪಡುವವರಾದರೆ, ವಿಂಗರ್ ಸತತವಾಗಿ ತಾಲೀಮುಗಳನ್ನು ಮಾಡುವವರಾಗಿದ್ದರು. ಇದನ್ನು ಸರಿದೂಗಿಸಲು ವಿಂಗರ್'ರ ತಾಲೀಮುಗಳ ಸಮಯದಲ್ಲಿ ಅಟೆನ್‌ಬರೋರವರೇ ಹಾಪ್ಕಿನ್ಸ್‌‌‌ರ ಪಾತ್ರ ವಹಿಸಿ, ಚಿತ್ರೀಕರಣದ ಹಿಂದಿನ ತಾಲೀಮನ್ನು ಮಾತ್ರ ಹಾಪ್ಕಿನ್ಸ್‌‌‌ರೊಡನೆ ನಡೆಯುವಂತೆ ಮಾಡುತ್ತಿದ್ದರು. "ಸಂಭಾಷಣೆಯನ್ನು ಕೇಳಿದಾಗ ಆತ ಅದೇ ಮೊದಲ ಬಾರಿಗೆ ಆ ಸಂಭಾಷಣೆಯನ್ನು ಹೇಳುತ್ತಿದ್ದಾರೆಂದೆನಿಸುವ ಭಾವ ಮೂಡಿಸುವ ಆ ವಿಶೇಷ ಸಾಮರ್ಥ್ಯವನ್ನು ಹೊಂದಿದ್ದೀರಿ. ಇದು ನಿಮಗೆ ದೇವರು ನೀಡಿರುವ ಅದ್ಭುತ ಕೊಡುಗೆ" ಎಂದು ಹಾಪ್ಕಿನ್ಸ್‌‌‌ರನ್ನು ನಿರ್ದೇಶಕರು ಪ್ರಶಂಸಿಸಿದ್ದರು. ಇದರೊಂದಿಗೆ, ಹಾಪ್ಕಿನ್ಸ್‌‌‌ರು ಓರ್ವ ಅನುಕರಣೆಯ ನೈಸರ್ಗಿಕ ಕೌಶಲವನ್ನು ಹೊಂದಿದವರಾಗಿದ್ದು ತಮ್ಮ ಸ್ಥಳೀಯ ವೆಲ್ಷ್‌‌‌ ಭಾಷಿಕ ಉಚ್ಚಾರಣಾ ಶೈಲಿಯನ್ನು ಪಾತ್ರಕ್ಕೆ ಅಗತ್ಯವಾದ ಯಾವುದೇ ರೀತಿ ಪರಿವರ್ತಿಸಿಕೊಳ್ಳಬಲ್ಲ ನಿಪುಣತೆಯನ್ನು ಹೊಂದಿದ್ದರು. ಸ್ಪಾರ್ಟಾಕಸ್‌‌ ಚಿತ್ರ ವನ್ನು 1991ರಲ್ಲಿ ಪುನರ್ನಿರ್ಮಾಣ ಮಾಡಿದಾಗ ಹೆಚ್ಚುವರಿ ದೃಶ್ಯಗಳಲ್ಲಿ ತನ್ನ ದಿವಂಗತ ಗುರು ಲಾರೆನ್ಸ್‌‌ ಆಲಿವಿಯೆರ್‌‌‌ರ ಧ್ವನಿಯನ್ನು ನಕಲು ಮಾಡಿದ್ದರು. ಬ್ರಿಟಿಷ್‌‌‌ TVಯ ಸಂದರ್ಶನ ಕಾರ್ಯಕ್ರಮ ಪಾರ್ಕಿನ್‌ಸನ್‌‌ ನ 1998ರ ಪುನರಾರಂಭದ ಆವೃತ್ತಿಯಲ್ಲಿ ಪ್ರಸಾರವಾದ ಅವರ ಸಂದರ್ಶನದಲ್ಲಿ ಅವರು ಹಾಸ್ಯ ನಟ ಟಾಮ್ಮಿ ಕೂಪರ್‌‌ರಂತೆ ಅಭಿನಯಿಸಿ ತೋರಿಸಿದ್ದರು. ತಮ್ಮ ಸಾಹಸಪ್ರಧಾನ ಚಲನಚಿತ್ರಗಳಲ್ಲಿ ವಿಶ್ವಾಸಾರ್ಹ ಅಭಿನಯ ತೋರಲು ಕೃತಕ ನಟನೆಯು "ಜಲಾಂತರ್ಗಾಮಿಯಂತೆ" ಸಹಕಾರಿಯಾಗಿದೆ ಎಂದು ಹಾಪ್ಕಿನ್ಸ್‌‌‌ ಹೇಳಿದ್ದರು. ಅವರು "ಓರ್ವ ನಟನಿಗೆ ಕೃತಕ ನಟನೆಯನ್ನು ತಪ್ಪಿಸಲು ಕಷ್ಟಸಾಧ್ಯ, ಸ್ವಲ್ಪವಾದರೂ ನಟನೆ ಇರಲೇಬೇಕಾಗುತ್ತದೆ. ಆದರೆ ನನ್ನ ಪ್ರಕಾರ ಕೃತಕ ನಟನೆಯನ್ನು ಕಡಿಮೆ ಮಾಡಿದಷ್ಟೂ ಉತ್ತಮ" ಎಂದು ಹೇಳಿದ್ದರು." === ಹ್ಯಾನ್ನಿಬಾಲ್‌‌‌‌ ಲೆಕ್ಟರ್‌‌ === ಹಾಪ್ಕಿನ್ಸ್‌‌‌'ರ ಬಹು ಪ್ರಖ್ಯಾತ ಪಾತ್ರವೆಂದರೆ ದ ಸೈಲೆನ್ಸ್‌‌ ಆಫ್‌‌ ದ ಲ್ಯಾಂಬ್ಸ್‌‌ ಚಿತ್ರದಲ್ಲಿನ ನರಭಕ್ಷಕ ಸರಣಿ ಕೊಲೆಗಾರ ಹ್ಯಾನ್ನಿಬಾಲ್‌‌‌‌ ಲೆಕ್ಟರ್‌‌‌ನದು, ಕ್ಲಾರೀಸ್‌ ಸ್ಟಾರ್ಲಿಂಗ್‌‌‌ರ ಪಾತ್ರದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ‌ಜೋಡೀ ಫಾಸ್ಟರ್‌‌ರ ಎದುರು ಅವರು ನಟಿಸಿದ ಈ ಪಾತ್ರಕ್ಕಾಗಿ ಅವರಿಗೆ 1992ರಲ್ಲಿ ಅತ್ಯುತ್ತಮ ನಟ ಅಕಾಡೆಮಿ ಪ್ರಶಸ್ತಿ ಕೂಡಾ ಸಿಕ್ಕಿತ್ತು. ಈ ಚಿತ್ರವು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮವಾಗಿ ಮೂಡಿಸಲಾದ ಕಥಾವಸ್ತುಗಳ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಹಾಪ್ಕಿನ್ಸ್‌‌‌ರು ಪರದೆಯ ಮೇಲೆ ಕೇವಲ 24ಕ್ಕೂ ನಿಮಿಷಗಳಿಗೂ ಸ್ವಲ್ಪವೇ ಹೆಚ್ಚಿನ ಕಾಲ ಮಾತ್ರವೇ ಕಾಣಿಸಿಕೊಳ್ಳುವುದಾದ್ದರಿಂದ ಇದು ಆಸ್ಕರ್‌‌ ಪ್ರಶಸ್ತಿಯನ್ನು ಪಡೆದ ಪ್ರಮುಖ ಪಾತ್ರಗಳಲ್ಲಿ ಕನಿಷ್ಟ ಅವಧಿಯದ್ದಾಗಿದೆ. ಲೆಕ್ಟರ್‌‌‌ನ ಪಾತ್ರದಲ್ಲಿ ಹಾಪ್ಕಿನ್ಸ್‌‌‌ ಎರಡು ಬಾರಿ ನಟಿಸಿದ್ದಾರೆ (2001ರಲ್ಲಿ ಹ್ಯಾನ್ನಿಬಾಲ್ ‌‌‌‌, 2002ರಲ್ಲಿ ರೆಡ್‌‌ ಡ್ರಾಗನ್ ‌‌). ದ ಸೈಲೆನ್ಸ್‌‌ ಆಫ್‌‌ ದ ಲ್ಯಾಂಬ್ಸ್‌‌ ಚಿತ್ರದಲ್ಲಿನ ಅಭಿನಯದ ಅವರ ಮೂಲ ಪಾತ್ರವನ್ನು ಅಮೇರಿಕನ್‌ ಫಿಲ್ಮ್‌‌‌ ಇನ್‌ಸ್ಟಿಟ್ಯೂಟ್‌‌‌ ಸಂಸ್ಥೆಯು ಶ್ರೇಷ್ಠ ಚಲನಚಿತ್ರ ಖಳನಾಯಕ ಎಂದು ಹೆಸರಿಸಿದೆ. ಆ ಪಾತ್ರವನ್ನು ಅವರಿಗೆ ನೀಡಿದ ಸಮಯದಲ್ಲಿ, . ಬಟರ್‌ಫ್ಲೈ ನಾಟಕ ದಲ್ಲಿ ನಟಿಸುತ್ತಾ ಹಾಪ್ಕಿನ್ಸ್‌‌‌ರು ಲಂಡನ್‌‌‌ ರಂಗಭೂಮಿಗೆ ಮರುಪ್ರವೇಶ ಮಾಡುತ್ತಿದ್ದರು. ಹಾಲಿವುಡ್‌‌ನಲ್ಲಿ ಅನೇಕ ವರ್ಷಗಳ ಕಾಲವಿದ್ದು ಬ್ರಿಟನ್‌‌‌ಗೆ ಮರಳಿದ್ದ ಅವರು, "ನನ್ನ ಜೀವನದ ಆ ಭಾಗವು ಮುಗಿಯಿತು ; ಅದೊಂದು ಮುಗಿದ ಅಧ್ಯಾಯ. ವೆಸ್ಟ್‌‌ ಎಂಡ್‌‌ನ ಬಳಿ ಸುತ್ತಾಡುವ ಗೌರವಾರ್ಹ ನಟನಾಗಿರಬೇಕೆಂದಿದ್ದೇನೆ ಮತ್ತು ಉಳಿದ ನನ್ನ ಜೀವನವನ್ನು ಗೌರವಾರ್ಹ BBCಯ ಉದ್ಯೋಗದಲ್ಲಿ ಕಳೆಯಲು ಉದ್ದೇಶಿಸಿದ್ದೇನೆ" ಎಂದು ಹೇಳುತ್ತಾ, ಎಲ್ಲವೂ ಇದ್ದರೂ ಅಲ್ಲಿನ ವೃತ್ತಿಜೀವನವನ್ನು ಕೈಬಿಟ್ಟು ಬಂದಿದ್ದರು." ಥಾಮಸ್‌‌ ಹ್ಯಾರಿಸ್‌‌‌ ವಿರಚಿತ ವಾಚನ ಕಾದಂಬರಿಗಳಲ್ಲಿನ ಮೊದಲ ಮೂರು ಕಾದಂಬರಿಗಳ ದೃಶ್ಯಅಳವಡಿಕೆಗಳಲ್ಲಿ ಪ್ರಾತಿನಿಧಿಕ ಖಳನಾಯಕನ ಪಾತ್ರವನ್ನು ಹಾಪ್ಕಿನ್ಸ್‌‌‌ ಮಾಡಿದ್ದರು. ತಮ್ಮ ಕಥೆಯ ಖಳ ಪಾತ್ರವನ್ನು ಹಾಪ್ಕಿನ್ಸ್‌‌‌'ರು ಅಭಿನಯಿಸಿದ ರೀತಿ ನೋಡಿ ಲೇಖಕರು ಬಹಳ ಸಂತೋಷಪಟ್ಟಿದ್ದರು ಎಂದು ವರದಿಯಾಗಿದೆ. ಆದಾಗ್ಯೂ, ಆ ಪಾತ್ರವನ್ನು ರೆಡ್‌‌ ಡ್ರಾಗನ್‌‌ ಚಿತ್ರದಲ್ಲಿ ಮಾತ್ರವೇ ಅಂತಿಮವಾಗಿ ಮಾಡುತ್ತಿರುವುದಾಗಿ ಸರಣಿಯ ಇತ್ತೀಚಿನ ಸೇರ್ಪಡೆ, ಹ್ಯಾನ್ನಿಬಾಲ್‌‌‌‌ ರೈಸಿಂಗ್ ‌‌‌ನಲ್ಲಿ ಆಖ್ಯಾಯಿಕೆಯ ಪಾತ್ರದಲ್ಲಿ ಕೂಡಾ ಆ ಪಾತ್ರವನ್ನು ಪುನರಾವರ್ತಿಸಲಾರೆ ಎಂದು ಹಾಪ್ಕಿನ್ಸ್‌‌‌ ಹೇಳಿದ್ದಾರೆ. == ಖಾಸಗಿ ಜೀವನ == 2007ರ ಹಾಗೆ, ಹಾಪ್ಕಿನ್ಸ್‌‌‌ರು ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿ ವಾಸಿಸುತ್ತಿದ್ದಾರೆ. ಹಿಂದೊಮ್ಮೆ 1970ರ ದಶಕದಲ್ಲಿ ತಮ್ಮ ಚಿತ್ರ ವೃತ್ತಿಜೀವನವನ್ನು ಅರಸಿ ಅವರು ಈ ರಾಷ್ಟ್ರಕ್ಕೆ ಬಂದಿದ್ದರೂ, 1980ರ ದಶಕದ ಕೊನೆಯಲ್ಲಿ ಬ್ರಿಟನ್‌‌‌ಗೆ ಮರಳಿದ್ದರು. ಆದಾಗ್ಯೂ ತಮ್ಮ 1990ರ ದಶಕದಲ್ಲಿನ ಯಶಸ್ಸಿನ ನಂತರ ಅವರು ..ಗೆ ಮರಳಲು ನಿರ್ಧರಿಸಿದ್ದರು. 12 ಏಪ್ರಿಲ್‌ 2000ರಂದು ಅವರು ದೇಶೀಕರಿಸಿದ ಪೌರರಾದರಲ್ಲದೇ, ರಾಷ್ಟ್ರದಾದ್ಯಂತ 3,000-ಮೈಲುಗಳ ರಸ್ತೆ ಯಾತ್ರೆ ನಡೆಸಿ ಸಂತಸವನ್ನು ಹಂಚಿಕೊಂಡಿದ್ದರು. ಹಾಪ್ಕಿನ್ಸ್‌‌‌ರು ಮೂರು ಬಾರಿ ಮದುವೆಯಾಗಿದ್ದಾರೆ. ಪೆಟ್ರೋನೆಲ್ಲಾ ಬಾರ್ಕರ್‌‌‌ (1967–1972) ಮತ್ತು ಜೆನ್ನಿಫರ್‌ ‌ಲಿಂಟನ್‌‌ (1973–2002)ರವರುಗಳು ಅವರ ಮೊದಲ ಇಬ್ಬರು ಪತ್ನಿಯರಾಗಿದ್ದಾರೆ. ಅವರು ಈಗ ಕೊಲಂಬಿಯಾ-ಸಂಜಾತೆ ಸ್ಟೆಲ್ಲಾ ಅರ್ರೋಯಾವೆಯವರನ್ನು ಮದುವೆಯಾಗಿದ್ದಾರೆ. ತಮ್ಮ ಮೊದಲ ಮದುವೆಯಿಂದ, ನಟಿ ಹಾಗೂ ಗಾಯಕಿಯಾಗಿರುವ ಅಬಿಗೈಲ್‌‌ ಹಾಪ್ಕಿನ್ಸ್‌‌‌ (. 20 ಆಗಸ್ಟ್‌ 1968) ಎಂಬ ಪುತ್ರಿಯನ್ನು ಅವರು ಹೊಂದಿದ್ದಾರೆ. ಅನೇಕ ದತ್ತಿನಿಧಿಗಳು ಮತ್ತು ಕೋರಿಕೆ ಸಂಸ್ಥೆಗಳಿಗೆ ಅವರು ತಮ್ಮ ಬೆಂಬಲವನ್ನು ನೀಡಿದ್ದಾರೆ, ಇದರಲ್ಲಿ ಗಮನಾರ್ಹವಾದುದೆಂದರೆ, ನ್ಯಾಷನಲ್‌ ಟ್ರಸ್ಟ್‌ನ ಸ್ನೋಡೊನಿಯಾ ಅಪೀಲ್‌‌ನ ಅಧ್ಯಕ್ಷರಾಗಿ, ಸ್ನೋಡೊನಿಯಾ ರಾಷ್ಟ್ರೀಯ ಉದ್ಯಾನದ ಸಂರಕ್ಷಣೆಗಾಗಿ ಮತ್ತು ಸ್ನೋಡಾನ್‌ನ ಭಾಗಗಳನ್ನು ಪ್ರತಿಷ್ಠಾನಕ್ಕಾಗಿ ಖರೀದಿಸುವ ಉದ್ದೇಶಗಳಿಗಾಗಿ ಮಾಡಿದ ನಿಧಿಸಂಗ್ರಹವಾಗಿದೆ. ಅವರ ಇಂತಹಾ ಚಟುವಟಿಕೆಗಳ ಕುರಿತ ಆಂಥನಿ ಹಾಪ್ಕಿನ್ಸ್‌‌‌' ಸ್ನೋಡೊನಿಯಾ , ಎಂಬ ಪುಸ್ತಕವನ್ನು ಗ್ರಹಾಂ ನೊಬೆಲ್ಸ್‌‌ನೊಂದಿಗೆ ಪ್ರಕಟಿಸಲಾಯಿತು. ಅನೇಕ ಮಾನವಪ್ರೇಮಿ ಸಂಘಟನೆಗಳಿಗೆ ಸಮಯ ಮತ್ತು ಬೆಂಬಲವನ್ನೂ ಕೂಡಾ ಹಾಪ್ಕಿನ್ಸ್‌‌‌ ನೀಡುತ್ತಾರೆ. ವೆನಿಸ್‌‌ ಮತ್ತು ಕ್ಯಾಲಿಫೋರ್ನಿಯಾ-ಮೂಲದ ಲಾಭೋದ್ದೇಶರಹಿತ ಮಾದಕವಸ್ತುಗಳ ಸೇವನೆಯಿಂದ ಹೊರಬರಲೆತ್ನಿಸುತ್ತಿರುವ ಮಹಿಳೆಯರಿಗೆ ಪುನರ್ವಸತಿ ಯೋಜನೆಯನ್ನು ಹಮ್ಮಿಕೊಂಡಿದ್ದ ವುಮನ್‌ ಇನ್‌ ರಿಕವರಿ, . ಸಂಸ್ಥೆಯ ನಿಧಿಸಂಗ್ರಹ ಸಮಾರಂಭದಲ್ಲಿ ಗೌರವ ಅತಿಥಿಯಾಗಿದ್ದರು. ಅವರು, ಕ್ಯಾಲಿಫೋರ್ನಿಯಾದ ಮಾಲಿಬುನಲ್ಲಿ ವಾಸಿಸುತ್ತಿದ್ದರೂ ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿನ ರಸ್ಕಿನ್‌ ನಟನಾ ಶಾಲೆ/ಸ್ಕೂಲ್‌ ಆಫ್‌ ಆಕ್ಟಿಂಗ್‌ನಲ್ಲಿ ತರಬೇತಿಯನ್ನು ಸ್ವಯಂಪ್ರೇರಿತರಾಗಿ ನೀಡುತ್ತಿದ್ದಾರೆ. ಮದ್ಯಸೇವನೆಯಿಂದ ಹೊರಬರಲು 12-ಹಂತಗಳ ಸಲಹಾಸಭೆಗಳಿಗೆ ಹಾಜರಾಗಿದ್ದ, ಹಾಪ್ಕಿನ್ಸ್‌ರವರು‌‌ 1975ರಲ್ಲಿ ಇದ್ದಕ್ಕಿದ್ದಂತೆ ಮದ್ಯಪಾನವನ್ನು ತ್ಯಜಿಸಿದ್ದರು. 9 ಏಪ್ರಿಲ್‌ 2007ರಂದು ಪ್ರಸಾರವಾದ ಟುನೈಟ್‌ ಷೋ ಎಂಬ ಸಂದರ್ಶನ ಕಾರ್ಯಕ್ರಮದ ಪ್ರಕಾರ ಚಿತ್ರೀಕರಣದ ಸೆಟ್‌/ಸ್ಥಳನಲ್ಲಿದ್ದಾಗ ಹಾಪ್ಕಿನ್ಸ್‌‌‌ರು ತಮಾಷೆಯ ಪ್ರವೃತ್ತಿಯನ್ನು ಹೊಂದಿರುತ್ತಿದ್ದರಲ್ಲದೇ, ಚಿತ್ರನಿರ್ಮಾಣದ ವೇಳೆಯಲ್ಲಿ ದೃಶ್ಯವೊಂದನ್ನು ಚಿತ್ರೀಕರಿಸುವ ಮುನ್ನ ನಾಯಿಯಂತೆ ಬೊಗಳುವುದು ಹಾಗೂ ಇತರೆ ಚಟುವಟಿಕೆಗಳ ಮೂಲಕ ಮನಸ್ಸನ್ನು ಹಗುರಗೊಳಿಸಲು ಪ್ರಯತ್ನಿಸುತ್ತಿದ್ದರು. ಪರಿಸರ ಸಂರಕ್ಷಣಾ ಸಮೂಹ ಸಂಘಟನೆಯಾದ ಗ್ರೀನ್‌ಪೀಸ್‌ನ ಪ್ರಮುಖ ಸದಸ್ಯರೂ ಆಗಿರುವ ಹಾಪ್ಕಿನ್ಸ್‌‌‌, 2008ರ ಆದಿಯ ಮಟ್ಟಿಗೆ ಜಪಾನ್‌‌ನ ವಾರ್ಷಿಕ ವ್ಹೇಲ್‌ಗಳ ಬೇಟೆಯು ಇನ್ನೂ ಮುಂದುವರೆಯುತ್ತಿರುವುದರ ಬಗ್ಗೆ ದನಿಯೆತ್ತಲು ನಿರ್ಮಿಸಿದ ಕಿರುತೆರೆ ಜಾಹಿರಾತು ಅಭಿಯಾನದಲ್ಲಿ ಕಾಣಿಸಿಕೊಂಡಿದ್ದಾರೆ. RAPtನ (ರೀಹ್ಯಾಬಿಲಿಟೇಷನ್‌ ಫಾರ್‌ ಅಡಿಕ್ಟೆಡ್‌ ಪ್ರಿಸನರ್ಸ್‌‌ ಟ್ರಸ್ಟ್‌/ಮಾದಕವಸ್ತು ವ್ಯಸನ ಹೊಂದಿರುವ ಖೈದಿಗಳ ಪುನರ್ವಸತಿ ಪ್ರತಿಷ್ಠಾನ) ಪ್ರಾರಂಭದ ದಿನಗಳಿಂದಲೂ ಅದರ ಪೋಷಕರೂ ಆಗಿರುವ ಹಾಪ್ಕಿನ್ಸ್‌‌‌, ಅದರ ಪ್ರಥಮ ತುರ್ತು ನಿರ್ವಹಣೆಯ ಮಾದಕವಸ್ತು ಮತ್ತು ಮದ್ಯಪಾನ ಪುನರ್ವಸತಿ ಘಟಕವನ್ನು ಡೌನ್‌ವ್ಯೂನಲ್ಲಿ ( ಬಂದೀಖಾನೆ) ತೆರೆಯಲು 1992ರಲ್ಲಿ ಸಹಾಯ ಮಾಡಿದ್ದರು. ಅವರು ಹಾಸ್ಯನಟ ಟಾಮ್ಮಿ ಕೂಪರ್‌‌ರ ಪ್ರಶಂಸಕರಲ್ಲಿ ಒಬ್ಬರು. 23 ಫೆಬ್ರವರಿ 2008ರಂದು, ಟಾಮ್ಮಿ ಕೂಪರ್‌‌ ಸಂಘದ ಪೋಷಕರಾಗಿ, ಕೇರ್‌ಫಿಲ್ಲಿಯಲ್ಲಿಯ ಹಾಸ್ಯರಂಜಕರ ತವರು ನಗರದಲ್ಲಿ ಸ್ಮಾರಕ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಮಾರಂಭಕ್ಕಾಗಿ, ಫೆಜ್‌ ಎಂಬ ಕೂಪರ್‌ರ ಛಾಪಿನ ವಸ್ತ್ರವನ್ನು ಧರಿಸಿದ್ದ ಹಾಪ್ಕಿನ್ಸ್‌‌‌ರವರು ಅವರ ವಾಡಿಕೆಯ ಹಾಸ್ಯಪ್ರಹಸನವೊಂದನ್ನು ಅಭಿನಯಿಸಿದ್ದರು. == ಇತರೆ ಸಾಧನೆಗಳು == ಹಾಪ್ಕಿನ್ಸ್‌‌‌ರವರು ಓರ್ವ ಪ್ರತಿಭಾನ್ವಿತ ಪಿಯಾನೋ ವಾದಕರೂ ಹೌದು. 1986ರಲ್ಲಿ, ಅವರು "ಡಿಸ್ಟೆಂಟ್‌ ಸ್ಟಾರ್‌" ಎಂಬ ಹೆಸರಿನ ಏಕಗೀತೆಯನ್ನು ಬಿಡುಗಡೆಗೊಳಿಸಿದ್ದರು. ಗೀತೆಗಳ ಪಟ್ಟಿಯಲ್ಲಿ ಅದು #75ನೇ ಸ್ಥಾನ ಪಡೆದಿತ್ತು. 2007ರಲ್ಲಿ, ತಾವು ವಿಶ್ವದ ಸುತ್ತ ಪ್ರವಾಸ ಹೋಗಲು ತೆರೆಯಿಂದ ತಾತ್ಕಾಲಿಕ ನಿವೃತ್ತಿ ಪಡೆದಿರುವುದಾಗಿ ಅವರು ಘೋಷಿಸಿದರು. ಸ್ಟೀಫನ್‌ ಬಾರ್ಟನ್‌‌ರೊಂದಿಗೆ ವೃಂದವಾದ್ಯ ಸಂಯೋಜಕರಾಗಿ ಹಾಪ್ಕಿನ್ಸ್‌‌‌ರು ಸಂಗೀತ ಕಛೇರಿಯೊಂದಕ್ಕೆ ಸಂಗೀತ ಸಂಯೋಜನೆ ಕೂಡಾ ಮಾಡಿದ್ದಾರೆ. ಅಂತಹಾ ಸಂಯೋಜನೆಗಳೆಂದರೆ ಅಕ್ಟೋಬರ್‌‌ 2008ರಲ್ಲಿ ಡಲ್ಲಾಸ್‌ ಸಿಂಫನಿ ವಾದ್ಯಗೋಷ್ಠಿಯು ವಿಶ್ವ ಪ್ರದರ್ಶನ ನೀಡಿದ ದ ಮಾಸ್ಕ್ಯೂ ಆಫ್‌ ಟೈಮ್‌ ಮತ್ತು ಷಿಜಾಯಿಡ್‌ ಸಾಲ್ಸಾ ಆಗಿವೆ. 1996ರಲ್ಲಿ, ವೇಲ್ಸ್‌‌ನ ಪ್ರದೇಶದ ಕಥೆಯನ್ನು ಹೊಂದಿರುವ ಚೆಕೋವ್‌‌‌ರ ಅಂಕಲ್‌ ವಾನ್ಯಾ ದ ದೃಶ್ಯ ಅಳವಡಿಕೆಯಾದ ತಮ್ಮ ಪ್ರಥಮ ಚಿತ್ರ ಆಗಸ್ಟ್ ‌ ಅನ್ನು ಹಾಪ್ಕಿನ್ಸ್‌‌ ನಿರ್ದೇಶಿಸಿದರು. ಅವರ ಪ್ರಥಮ ಚಿತ್ರಕಥಾ ರಚನೆಯನ್ನು ಹೊಂದಿದ್ದ ಅವರೇ ನಿರ್ದೇಶಿಸಿ ಸಂಗೀತ ಸಂಯೋಜಿಸಿದ ಪ್ರಾಯೋಗಿಕ ರೂಪಕ ಸ್ಲಿಪ್‌ಸ್ಟ್ರೀಮ್‌ ಚಿತ್ರವು 2007ರಲ್ಲಿನ ಸನ್‌ಡಾನ್ಸ್‌ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. BBCಯ ಸಾಂದರ್ಭಿಕ ಹಾಸ್ಯ ಕಾರ್ಯಕ್ರಮ ಓನ್ಲೀ ಫೂಲ್ಸ್‌ ಅಂಡ್‌ ಹಾರ್ಸಸ್‌ ನ ಅಭಿಮಾನಿಯೂ ಆಗಿರುವ ಹಾಪ್ಕಿನ್ಸ್‌‌‌, ಸಂದರ್ಶನವೊಂದರಲ್ಲಿ ಆ ಸರಣಿಯಲ್ಲಿ ಕಾಣಿಸಿಕೊಳ್ಳಲು ತಾನು ಬಹಳ ಇಷ್ಟಪಡುತ್ತೇನೆ ಎಂದು ತಿಳಿಸಿದ್ದರು. ಈ ಸಂದರ್ಶನವನ್ನು ನೋಡಿದ ಅದರ ಲೇಖಕ ಜಾನ್‌ ಸುಲ್ಲಿವಾನ್‌, ಹಾಪ್ಕಿನ್ಸ್‌‌‌ರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಡ್ಯಾನ್ನಿ ಡ್ರಿಸ್ಕಾಲ್‌ ಎಂಬ ಸ್ಥಳೀಯ ಖಳನಾಯಕನನ್ನು ಸೃಷ್ಟಿಸಿದರು. ಆದಾಗ್ಯೂ ನವೀನ ಸರಣಿಯ ಚಿತ್ರೀಕರಣವು ದ ಸೈಲೆನ್ಸ್‌ ಆಫ್‌ ದ ಲ್ಯಾಂಬ್ಸ್‌‌ ನ ಚಿತ್ರೀಕರಣದ ಸಮಯದಲ್ಲಿಯೇ ಆರಂಭವಾದುದರಿಂದ, ಹಾಪ್ಕಿನ್ಸ್‌‌‌ ಅದರಲ್ಲಿ ಪಾಲ್ಗೊಳ್ಳುವಂತಿರಲಿಲ್ಲ. ಆ ಪಾತ್ರವು ಅವರ ಬದಲಿಗೆ ಸ್ನೇಹಿತ ರಾಯ್‌ ಮಾರ್ಸ್‌‌ಡೆನ್‌ರಿಗೆ ಹೋಯಿತು. ಅನೇಕ ಪ್ರಖ್ಯಾತ ಐತಿಹಾಸಿಕ ಮತ್ತು ಕಾಲ್ಪನಿಕ ಪಾತ್ರಗಳನ್ನು ಹಾಪ್ಕಿನ್ಸ್‌‌‌ ಅಭಿನಯಿಸಿದ್ದು, ಅವುಗಳಲ್ಲಿ ಕೆಳಕಂಡವು ಸೇರಿವೆ: == ಪ್ರಶಸ್ತಿಗಳು == ದ ಸೈಲೆನ್ಸ್‌‌ ಆಫ್‌‌ ದ ಲ್ಯಾಂಬ್ಸ್‌‌ ಚಿತ್ರಕ್ಕಾಗಿ ಪ್ರಶಸ್ತಿ ಗಳಿಸುವುದರೊಂದಿಗೆ, ಹಾಪ್ಕಿನ್ಸ್‌‌‌ರು ದ ರಿಮೇನ್ಸ್‌‌ ಆಫ್‌‌ ದ ಡೇ (1993), ನಿಕ್ಸಾನ್‌‌‌ (1995) ಮತ್ತು ಅಮಿಸ್ಟಾಡ್‌‌‌ (1997)ಗಳ ಪಾತ್ರ ನಿರ್ವಹಣೆಗೆ ಆಸ್ಕರ್‌‌ ಪ್ರಶಸ್ತಿ-ನಾಮಾಂಕಿತರೂ ಆಗಿದ್ದರು. 'ಯ ನಿರ್ಮಾಣದ ವಾರ್‌ ಅಂಡ್‌ ಪೀಸ್‌‌ ಚಿತ್ರದಲ್ಲಿನ ಪಿಯೆರ್ರೆ ಬೆಜುಖೊವ್‌‌‌ನ ಪಾತ್ರ ನಿರ್ವಹಣೆಗಾಗಿ 1973ರಲ್ಲಿ ಅತ್ಯುತ್ತಮ ನಟನಾಗಿ ಪ್ರಶಸ್ತಿ ಪಡೆದ ಹಾಪ್ಕಿನ್ಸ್‌‌‌, ದ ಸೈಲೆನ್ಸ್‌‌ ಆಫ್‌‌ ದ ಲ್ಯಾಂಬ್ಸ್ ಮತ್ತು ಷಾಡೋಲ್ಯಾಂಡ್ಸ್ ಗಳಲ್ಲಿಯೂ ಕೂಡಾ ಪ್ರಶಸ್ತಿ ಪಡೆದಿದ್ದಾರೆ. ಮ್ಯಾಜಿಕ್ ‌‌‌ ಮತ್ತು ದ ರಿಮೇನ್ಸ್‌‌ ಆಫ್‌‌ ದ ಡೇ ಚಿತ್ರಗಳ ಅದೇ ವರ್ಗದಲ್ಲಿ ನಾಮಾಂಕಿತಗೊಂಡಿದ್ದ ಅವರು ದ ಲಯನ್‌‌ ಇನ್‌‌ ವಿಂಟರ್ ‌‌ ಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ದ ಲಿಂಡ್‌ಬರ್ಗ್ಹ್‌‌‌ ಕಿಡ್‌ನ್ಯಾಪಿಂಗ್‌ ಕೇಸ್‌‌ ಮತ್ತು ದ ಬಂಕರ್‌‌ ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗಾಗಿ ಎಮ್ಮಿ ಪ್ರಶಸ್ತಿಗಳನ್ನು ಗೆದ್ದಿರುವ ಅವರು, ದ ಹಂಚ್‌ಬ್ಯಾಕ್‌ ಆಫ್‌‌ ನೋಟ್ರೆ ಡೇಮ್‌‌ ಮತ್ತು ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಚಿತ್ರಗಳಿಗಾಗಿ ಎಮ್ಮಿ-ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು. ಸ್ವಿಟ್ಜರ್‌ಲೆಂಡ್‌‌‌'ನ ಲೊಕಾರ್ನೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಲಿಪ್‌ಸ್ಟ್ರೀಮ್ ‌‌ ಚಿತ್ರದಲ್ಲಿನ ನಿರ್ದೇಶನ ಮತ್ತು ನಟನೆ ಎರಡಕ್ಕೂ ಅವರು ಪ್ರಶಸ್ತಿಗಳನ್ನು ಪಡೆದಿದ್ದರು. ಫೆಬ್ರವರಿ 2008ರಲ್ಲಿ ನಡೆದ ಆರೆಂಜ್‌‌ ಬ್ರಿಟಿಷ್‌‌‌ ಅಕಾಡೆಮಿ ಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ ಹಾಪ್ಕಿನ್ಸ್‌‌‌ರು ಬ್ರಿಟಿಷ್‌‌‌ ಅಕಾಡೆಮಿ ಆಫ್‌‌ ಫಿಲ್ಮ್‌‌‌‌ ಅಂಡ್‌‌ ಟೆಲಿವಿಷನ್‌‌‌ ಆರ್ಟ್ಸ್‌‌ ()ನ ಫೆಲೋ ಸದಸ್ಯರಾದರು. 1979ರಲ್ಲಿ, ಆಂಥನಿ ಹಾಪ್ಕಿನ್ಸ್‌‌‌ರು ಲಂಡನ್‌‌‌ನ ರಾಯಲ್‌‌ ಅಕಾಡೆಮಿ ಆಫ್‌‌ ಮ್ಯೂಸಿಕ್‌‌‌ ಸಂಸ್ಥೆಯ ಗೌರವ ಸದಸ್ಯರೂ ಆದರು. == ಚಲನಚಿತ್ರಗಳ ಪಟ್ಟಿ == == ಆಕರಗಳು == == ಹೊರಗಿನ ಕೊಂಡಿಗಳು == . . ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಹಾಪ್ಕಿನ್ಸ್‌‌‌ ಆಂಥನಿ ಹಾಪ್ಕಿನ್ಸ್‌‌‌ ಟೆಂಪ್ಲೇಟು: ಆಂಥನಿ ಹಾಪ್ಕಿನ್ಸ್‌‌‌ ' ವೇಲ್ಸ್‌‌ನಲ್ಲಿ ಆಂಥನಿ ಹಾಪ್ಕಿನ್ಸ್‌‌‌ ಆಂಥನಿ ಹಾಪ್ಕಿನ್ಸ್‌‌‌ 24 2010 ವೇಬ್ಯಾಕ್ ಮೆಷಿನ್ ನಲ್ಲಿ., ಜಯಂಟ್‌ ಆಫ್‌ ದ ವ್ಯಾಲಿ — ಮೈಕೆಲ್‌ ಫೀನೆ ಕ್ಯಾಲ್ಲನ್‌‌ ರಚಿತ, 2007 ವಾಯೇಜರ್‌ ನಿಯತಕಾಲಿಕೆ 1980ರ ದಶಕದಲ್ಲಿ ಆಂಥನಿ ಹಾಪ್ಕಿನ್ಸ್‌‌‌ -ವೇಲ್ಸ್‌‌ ಕಾರ್ಯಕ್ರಮ ಎಲಿನಾರ್‌ನಲ್ಲಿ ಸಂದರ್ಶನ ನೀಡಿದ್ದು ಆನ್‌‌ ಈವ್‌ನಿಂಗ್‌ ವಿತ್‌ ಆಂಥನಿ ಹಾಪ್ಕಿನ್ಸ್‌‌‌ -ವೇಲ್ಸ್‌‌ -ವೇಲ್ಸ್‌‌ನ ಹಳೆಯ ಕಾರ್ಯಕ್ರಮದಲ್ಲಿ ಅವರ ಧ್ವನಿ ಪ್ರಸಾರ ಆಂಥನಿ ಹಾಪ್ಕಿನ್ಸ್‌‌‌, 2008ರಲ್ಲಿ BAFTAದ ಫೆಲೋ ಸದಸ್ಯರಾದರು 17 2011 ವೇಬ್ಯಾಕ್ ಮೆಷಿನ್ ನಲ್ಲಿ. ಫೆಲೋ ಮ್ಯಾನ್‌ – ಆಂಥನಿ ಹಾಪ್ಕಿನ್ಸ್‌‌‌ 17 2011 ವೇಬ್ಯಾಕ್ ಮೆಷಿನ್ ನಲ್ಲಿ., ಚಿತ್ರ ಸಾಹಿತಿ ಕ್ವೆಂಟಿನ್‌ ಫಾಲ್ಕ್‌ರಿಂದ BAFTAದಲ್ಲಿನ ವ್ಯಕ್ತಿಪರಿಚಯ